ಕವಿತೆ,ಸಮಾಜ ಮತ್ತು ಕ್ರಾಂತಿ ಇತ್ಯಾದಿ

Originally posted on The Mysore Post:
  ‘ಸಾರ್,ಕವಿಗಳಿಗೆ ಸಾಮಾಜಿಕ ಬದ್ಧತೆ ಇರಬೇಕೂ ಅಂತೀರಾ?’ ಆಗ ತಾನೇ ಮೀಸೆ ಮೂಡಲು ತೊಡಗಿದ್ದ ಆ ಹುಡುಗ ಮುಖವನ್ನು ಚೂಪು ಮಾಡಿಕೊಂಡು ನನ್ನನ್ನು ಗುರಿಯಾಗಿಟ್ಟುಕೊಂಡು ಪ್ರಶ್ನೆಯೊಂದನ್ನು ಒಗೆದ. ನಾನಾಗಿದ್ದಿದ್ದರೆ, ‘ಸಾರ್ ಕವಿತೆಯನ್ನು ಬಿಳಿ ಹಾಳೆಯ ಒಂದೇ ಮಗ್ಗುಲಲ್ಲಿ ಬರೆಯಬೇಕಾ?ಅಥವಾ ಎರಡೂ ಕಡೆ ಬರೆದರೆ ಆಗುತ್ತದಾ?’ ಎಂದು ಕೇಳುವಂತಹ ವಯಸ್ಸು. ‘ಇದೆಲ್ಲಾ ಹೋಗಲಿ ಮಾರಾಯಾ..ನಿನ್ನ ಊರು ಯಾವುದು ? ಏನು ಮಾಡುತ್ತಿದ್ದೀಯಾ? ಹಾಸ್ಟೆಲಲ್ಲಿ ಊಟ ಸರಿಯಾಗುತ್ತದಾ? ಎಂದು ಕೇಳಿದೆ. ‘ಅಲ್ಲ  ಸಾರ್…